ದತ್ತಾತ್ರೇಯನು ಹಿಂದೂಗಳಿಂದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಅವತಾರನಾದ ದೇವರೆಂದು ಪರಿಗಣಿಸಲ್ಪಡುತ್ತಾನೆ. ದತ್ತ ಶಬ್ದದ ಅರ್ಥ "ಕೊಟ್ಟಿದ್ದು", ತ್ರಿಮೂರ್ತಿಗಳು ತಮ್ಮನ್ನು ತಾವೇ ಋಷಿ ದಂಪತಿಗಳಾದ ಅತ್ರಿ ಮತ್ತು ಅನಸೂಯೆಯರಿಗೆ ಪುತ್ರನ ರೂಪದಲ್ಲಿ ಅರ್ಪಿಸಿದ್ದರಿಂದ ದತ್ತನೆಂದು ಕರೆಯಲ್ಪಡುತ್ತಾನೆ. ಅವನು ಅತ್ರಿಯ ಪುತ್ರ, ಹಾಗಾಗಿ "ಆತ್ರೇಯ"ನೆಂಬ ಹೆಸರು.ದತ್ತಾತ್ರೆಯ ಬಗ್ಗೆ ತಿಳಿಯಲು ಗುರುಚರಿತ್ರೆ ಓದಿ. ದತ್ತತ್ರೆಯರು ಜನಿಸಿದ್ದು ಮಾಹುರ್ ಎಮ್ಬ ಗ್ರಾಮದಲ್ಲಿ ಜನಿಸಿದರು. ದತ್ತಾತ್ರೆಯರು ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಸಂಚರಿಸುತ್ತಾರೆಂದು ನಂಬಿಕೆ. ಇತ್ತಿಚಿನ ದಶಕಗಳಲ್ಲಿ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ದತ್ತಾತ್ರೇಯರ ತೀವ್ರ ಪ್ರಚಾರದಲ್ಲಿ ತೊಡಗಿದ್ದಾರೆ. ಇವರು ಎಪ್ಪತ್ತಕ್ಕೂ ಹೆಚ್ಚುದತ್ತಾತ್ರೆಯರ ದೇವಾಲಯಗಳನ್ನು ಕಟ್ಟಿಸಿದ್ದಾರೆ. ಬಾಬಾಬುಡನ್ ಗಿರಿಯಲ್ಲಿ ದತ್ತಾತ್ರೇಯರ ಪೂಜೆಯನ್ನು ಮುಸ್ಲಿಮ್ ಸೂಫಿ ಸಂತನೊರ್ವರು ಪೂಜಿಸುತ್ತಿದ್ದರೆಂದು ನಂಬಿಕೆ. ಇದರಿಂದಾಗಿ ಹಿಂದು ಮುಸ್ಲಿಂ ಬಾಂದವ್ಯ ಕ್ಷೇಣಿಸಿದೆ. ಮೈಸೂರಿನ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯಾರ್ರವರು "ದತ್ತಾತ್ರೆಯ" ಎಂಬ ಗ್ರಂಥವನ್ನು ರಚಿಸಿದ್ದಾರೆ. ಗುಜರಾತ್ ನ ಗಿರಿನಾರ್ ಪರ್ವತದ ಮೇಲೆ ಪ್ರಾಚೀನ ದತ್ತ ಮಂದಿರವು ಇದೆ.
No comments:
Post a Comment